ಬಹಳ ದಿನಗಳ ನಂತರ ಭೂಮಿ ಮೇಲೆ ಕಾಲೂರಿದ ನನಗೆ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆ ಫೋನಾಯಿಸುವ ಅಭ್ಯಾಸ, ಅಭ್ಯಾಸ ಅನ್ನುವುದಕ್ಕಿಂತ ನಾನು ನೀರಿನಿಂದ ಭೂಮಿಗೆ ಬಂದಿರುವ ಬಗ್ಗೆ ಸಾರಿ ಹೇಳುವ ಒಂದು ಪರಿ ಅಂತ ಅನ್ನಬಹುದು. ಈಚಿನ ದಿನಗಳಲ್ಲಿ ಮಾತು ಕತೆಗಳೆಲ್ಲವೊ Facebook, Twitter ನಲ್ಲಿ ನಡೆಯುತ್ತಿದ್ದರೂ ನನಗೆ ಸಮಾಧಾನ ಕೊಡುವುದು ಫೋನಿನ ಸಂಭಾಷಣೆ ಮಾತ್ರ. ಇದರಿಂದ ಕೆಲವರಿಗೆ ಕಸಿವಿಸಿ ಯಾಗುವುದು ನಿಜ,ಸಾಮಾನ್ಯವಾಗಿ ಫೋನು ಮಾಡಿದಾಗ ಹೆಚ್ಚುವರಿ ಜನ Busy ಇರುವುದುಂಟು, "ಯಾವಾಗ್ ಬಂದ್ಯೊ?? ಸ್ವಲ್ಪ Busy ಇದೀನಿ ಆಮೇಲೆ Phone ಮಾಡ್ತೀನಿ" ಅಂತ ಹೇಳಿ ಮಾಡಿ ಮತ್ತೆ ಸಮಯ ಸಿಕ್ಕಾಗ ಫೋನು ಮಾಡಿ ಮಾತಾಡುವವರದ್ದು ಒಂದು ವರ್ಗವಾದರೆ, ಫೋನನ್ನು ಎತ್ತದೆ ಇರುವವರದ್ದು ಇನ್ನೊಂದು ವರ್ಗ.ನನ್ನ ಗಮನ ಸೆಳೆಯುವವರೆಂದರೆ ಈ ಎರಡನೆ ವರ್ಗದವರು, ಮತ್ತು ಫೋನು ಎತ್ತದೆ ಇರುವುದಕ್ಕೆ ಅವರುಗಳು ನೀಡುವ ಸಮಜಾಯಿಸಿ. ಇದರ ಅವಶ್ಯಕಥೆ ಇಲ್ಲದಿದ್ದರೂ ಕತೆ ಮೇಲೆ ಕತೆ ಕಟ್ಟಿ ಕೊನೆಗೆ ತಾವು ಫೋಣಿಸಿದ ಸುಳ್ಳಿನ ಕಂತೆಯೊಳಗೆ ತಾವೇ ಸಿಲುಕಿ ಒದ್ದಾಡುವ ಸ್ಥಿತಿ ಕಂಡು ನನ್ನನು ನಗುವಂತೆ ಮಾಡುವ ಮಹಾನುಭಾವರಿಗೆ ನನ್ನ ಈ ಬ್ಲಾಗ್ ಅರ್ಪಣೆ.
ಎಲ್ಲಕ್ಕಿಂತ ಮಿಗಿಲಾಗಿ ಅವರು ಕೊಡುವ ಕಾರಣಗಳಲ್ಲಿ ಅವರ ಕ್ರಿಯಾಶೀಲತೆ ನನಗೆ ಅಚ್ಚರಿಯುಂಟು ಮಾಡುತ್ತದೆ. ಇಲ್ಲಿ ಕೆಲವು ಉದಾಹರಣೆ ಅಷ್ಟೆ ನಿಮ್ಮ ಮುಂದಿಡುತ್ತೇನೆ. ಓದಿ.
"ಮಗಾ ನಿನ್ ಪೋನು ಬಂದಾಗ ನಾನು Meeting ನಲ್ಲಿ ಇದ್ದೆ, ಆಮೇಲೆ ಮತ್ತೆ ಮಾಡಿದಾಗ Drive ಮಾಡ್ತಾಯಿದ್ದೆ" ಆದರೆ ನಾನು ಫೋನು ಮಾಡಿದ್ದು ಒಂದೇ ಸಲ.
"ನಿನ್ ಪೋನು ಬಂದಾಗ ನಾನು ನಮ್ಮ Manager ಜೊತೆ Project Discuss ಮಾಡ್ತಾಯಿದ್ದೆ" ನಾನು ಪೋನು ಮಾಡಿದ್ದು ಭಾನುವಾರ, ಹೀಗೆ "ಕೆಲಸ ಇದೆ" ಅನ್ನೋರು ಇವ್ರೆ, "ತಲೆ ಮೇಲೆ ತಲೆ ಬಿದ್ರು Weekends ನಲ್ಲಿ Office ಕೆಲಸ ಮಾಡಲ್ಲ" ಅಂತ ಹೇಳೋರು ಇವ್ರೆ, ಯಾವುದನ್ನ ನಂಬೋದು??
"ನಿನ್ ಪೋನು ಬಂದಾಗ ನಾನು Shopping ಮಾಡ್ತಾಯಿದ್ದೆ, ಎರಡೂ ಕೈಯಲ್ಲಿ ಬ್ಯಾಗು ಗಳಿದ್ದವು, ಅದಕ್ಕೆ Receive ಮಾಡೋಕೆ ಆಗ್ಲಿಲ್ಲ"
"ಫೋನನ್ನ ಕಾರಿನಲ್ಲೇ ಬಿಟ್ಟು Picture ನೋಡೋಕೆ ಹೋಗಿದ್ದೆ" ಎರಡೂ ಮೂಗಿನ ಮೇಲೆ ಬೆರಳು ಇಡುವಂತ ಉತ್ತರಗಳು.
ಇನ್ನೊಂದು ಪಂಗಡ ಇದೆ, ತಮ್ಮ ಬಗ್ಗೆ ಹೇಳಿ ಕೊಳ್ಳುವವರು, ಆದರೆ ನೇರವಾಗಿ ಅವರು ಹೇಳಿ ಕೊಳ್ಳುವುದಿಲ್ಲ, ಬದಲಾಗಿ ನಮ್ಮ ಬಾಯಿಂದಲೆ ಶಹಭಾಶ್ ಗಿರಿ ಗಿಟ್ಟಿಸಿ ಕೊಳ್ಳುವುದರಲ್ಲಿ ನಿಸ್ಸೀಮರು.
"Hello!!!, Yes, who's this??!!" ಅಂತ ಹೇಳಿ ನಮ್ಮ ಮುಖಭಂಗವಾಗಿದಕ್ಕೆ ಸಂತೋಷ ಪಡುತ್ತಾ, "ಅಯ್ಯೋ ನೀನೇನೊ??, ನಾನು ಹೊಸ Phone ತಗೋಂಡೆ, ಹಳೇ Contacts ಎಲ್ಲ Delete ಆಯ್ತು, ಅದಿಕ್ಕೆ ಗೊತ್ತಾಗ್ಲಿಲ್ಲ"
ಹೊಸ ಪೋನು ಬಂದರೆ ಎಲ್ಲರೂ ಮಾಡುವ ಕೆಲಸವೆಂದರೆ ಹಳೆಯ ನಂಬರುಗಳನ್ನು SIM ಗೆ Transfer ಮಾಡುವುದು ಅಲ್ಲವಾ?ಅದೇ ಪುಣ್ಯಾತ್ಮನಿಗೆ 2-3 ತಿಂಗಳ ನಂತರ ಪೋನು ಮಾಡಿದಾಗ ಸಿಗುವ ಪ್ರತಿಕ್ರಿಯೆ..,
"ಇದ್ಯಾವ ನಂಬರೋ ಮಾರಾಯಾ? ಪದೇ ಪದೇ ನಂಬರು ಬದಲಾಯಿಸಿದರೆ ನಮಗೂ ಗುರ್ತು ಹಿಡಿಯೋದು ಕಷ್ಟ ಆಗುತ್ತೆ" ಕಳೆದ 8 ವರ್ಷಗಳಿಂದಲೂ ನನ್ನ ನಂಬರು ಬದಲಾಗಿಲ್ಲವೆಂಬುದು ಗೊತ್ತಿದ್ದೂ ಆಡುವ ಮಾತಿದು.
"ಒ ನೀನಾ?? Sorry, US ಇಂದ ನಮ್ಮ Manager ಪೋನು ಬರೋದಿತ್ತು, ಅವರದೇ ಪೋನು ಅನ್ಕೊಂಡೆ" ನನ್ನ ನಂಬರು ನೋಡುದ್ರೆ ಗೊತ್ತಾಗಲ್ವ ಇದು Local Call ಅಂತ. " Handsfree ಹಾಕ್ಕೊಂಡಿದ್ನಲ್ಲ, ಗೊತ್ತಾಗಲಿಲ್ಲ" ಎನ್ನುವ ReadyMade ಉತ್ತರ ಅವರ ಬಳಿ ಇರುತ್ತದೆ. ಬೆಪ್ಪಾಗುವ ಸರದಿ ಮಾತ್ರ ನನ್ನದು.ಇದು ಅತ್ಯಂತ ಕ್ರಿಯಾಶೀಲತೆ ಇರುವವರು ಕೊಡುವ ಉತ್ತರಗಳು, ಅಷ್ಟೇನು ಕ್ರಿಯಾಶೀಲತೆಯಿಲ್ಲದವರ ಉತ್ತರ ಅಷ್ಟೇ ಸಪ್ಪೆಯಾಗಿರುತ್ತದೆ.
"ಫೋನು charge ಗೆ ಹಾಕಿದ್ದೆ, ರಿಂಗ್ ಆಗಿದ್ದು ಗೊತ್ತಾಗ್ಲಿಲ್ಲ"
"ಫೋನು silent mode ನಲ್ಲಿ ಇತ್ತು ಅದಕ್ಕೆ ಗೊತ್ತಾಗ್ಲಿಲ್ಲ" ಇವರು ಕೊಡುವ ಕಾರಣಗಳು ಸಾಮಾನ್ಯವಾಗಿ ಬದಲಾಗುವುದಿಲ್ಲ.
ಇನ್ನೊಂದು ಪಂಗಡ ಇದೆ, ಇವರ ಬಳಿ ಯಾವುದೇ ಸಮಜಾಯಿಸಿ ಇರುವುದಿಲ್ಲ, ಬದಲಾಗಿ ನೇರವಾಗಿ ನಮ್ಮ ಮೇಲೆ ಆರೋಪ ಹೊರಸುವವರು. "ಫೋನು ಮಾಡಿದ್ಯ? ನನಗಾ??!! ಯಾವಾಗ?? ಸಾದ್ಯನೇ ಇಲ್ಲ, ನಿನ್ನ ನಂಬರಿನಿಂದ ಯಾವುದೇ ಫೋನು ಬಂದಿಲ್ಲ, ನೀ ಬೇರೆ ಯಾರಿಗೋ ಮಾಡಿದ್ಯ.." ಕೊನೆಗೆ ನಾವೇ ಸೋತು ಅವರ ವಾದಕ್ಕೆ ಒಪ್ಪಿಗೆ ನೀಡಿದ ನಂತರವೇ ಮಾತು ಮುಂದುವರಿಯುವುದು.
ಇಲ್ಲಿ ನಾನು ನೀವು ಕೂಡ ಇದಕ್ಕೆ ಹೊರತಲ್ಲ, ದಿನದಲ್ಲಿ ಒಮ್ಮೆಯಾದರೂ ಇಂತಹ ಒಂದು ಸನ್ನಿವೇಶ ಎದುರಿಸಿರುತ್ತೇವೆ, ಮೇಲೆ ಹೇಳಿದ ಕಾರಣಾವಳಿಗಳನ್ನು ಕೇಳಿರುತ್ತೇವೆ, ಇವೆಲ್ಲಕ್ಕಿಂತ ಮಿಗಿಲಾಗಿ ಮೇಲೆ ವರ್ಣಿಸಿರುವ ಯಾವುದಾದರೊಂದು ಪಂಗಡಕ್ಕೆ ನಾವೂ ಸೇರಿದ್ದೇವೆ, ಮತ್ತು ನಮಗೆ ಬೇಡದವರು, ಬೇಕಾದವರು, ಪೋನು ಮಾಡಿದಾಗ ಮೇಲೆ ಹೇಳಿರುವ ಕಾರಣಗಳಲ್ಲಿ ಒಂದನ್ನು ಖಂಡಿತವಾಗಿಯು ಬಳಸಿದ್ದೇವೆ.
ನೀವು ಯಾವ ಗುಂಪಿಗೆ ಸೇರಿದವರು ಅಂತ ತೀರ್ಮಾನಿಸಿ, ನನ್ನ ಮೊಬೈಲ್ಗೆ ಯಾವುದೋ Missed Call ಬಂದಿದೆ, Call Miss ಆಗಿದಕ್ಕೆ ಅವರಿಗೆ ಒಂದು ಕಾರಣ ಕೊಟ್ಟ ನಂತರ ನಾನು ಯಾವ ಗುಂಪಿಗೆ ಸೇರಿದವನು ಅಂತ ಹೇಳುತ್ತೇನೆ.
Thursday, 9 February 2012
Friday, 25 March 2011
ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ...
"ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ.........." FM ನಲ್ಲಿ ತೇಲಿ ಬಂದ ಈ ಹಾಡು ನನ್ನ ಮನಸ್ಸಿನ ಯೋಚನಾಲಹರಿಯನ್ನು ಸ್ವಲ್ಪ ಗರಿಗೆದರಿದಂತೆ ಮಾಡಿತು. ಇಂದಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ಆ ಹಕ್ಕಿಯನ್ನು ನೆನೆದು ಬರೆದ ಈ ಅಪರೂಪದ ಹಾಗು ಎಕೈಕ ಹಾಡು ಆ ಹಕ್ಕಿಗೆ ಅರ್ಪಿಸಿದಂತಿತ್ತು.
ಗುಬ್ಬಚ್ಚಿಯೇ ಇಲ್ಲದ ಇಂದಿನ ದಿನಗಳಲ್ಲಿ ಗುಬ್ಬಚ್ಚಿಯ ಗೂಡಿನಲ್ಲಿ ಕದ್ದುಮುಚ್ಚಿ ಪ್ರೇಮಿಗಳ ಕೈಲಿ ಕುಚ್ಚಿಕುಚ್ಚಿ ಆಡಿಸುವ ಆ ಸಾಹಿತ್ಯಕಾರನ ಕಲ್ಪನೆಗೆ ನಿಜಕ್ಕು ತಲೆಬಾಗಬೇಕು.
ನಾನು ಮಗುವಾಗಿದ್ದಾಗ ಊಟ ಮಾಡಲು ಹಠ ಮಾಡಿದರೆ ಕಾಗೆ-ಗುಬ್ಬಿ ತೋರಿಸಿ ಊಟ ಮಾಡಿಸುತ್ತಿದ್ದರಂತೆ. ಕಾಗೆ-ಗುಬ್ಬಿ ತೋರಿಸಿದರೆ ಕ್ಷಣ ಮಾತ್ರದಲ್ಲಿ ಮಗುವಿನ ಹಟ ಬಂದ್, ಮಹಡಿಯ ಮೇಲೆ ಬಿಸಿಲಿಗೆ ಹಾಕಿದ ಅರಳು ಸಂಡಿಗೆ, ಗೋದಿ, ಅಕ್ಕಿ ಮುಂತಾದವುಗಳನ್ನು ಕದ್ದು-ಮುಚ್ಚಿ ಹೆಕ್ಕಿ ತಿನ್ನುತ್ತಿದ್ದ ಅವುಗಳ ಸಮೂಹವು ಒಮ್ಮೆ "ಉಶ್ಷ್.." ಎಂದು ಕೈ ಬೀಸಿದಾಗ ಪುರ್ರ್ರನೆ ಹಾರಿಹೋಗುವ ಅವುಗಳ ಪರಿ ನಿಜಕ್ಕೊ ಮನಸ್ಸಿಗೆ ಮುದ ನೀಡುತ್ತಿದ್ದವು. ಹೀಗೆ ಬಾಲ್ಯದಲ್ಲಿ ನಮ್ಮನ್ನು ಕಾಡಿದ, ಮನರಂಜಿಸಿದ ಗುಬ್ಬಕ್ಕ ಇಂದು ನಶಿಸಿ ಹೋಗುತ್ತಿರುವ ಪ್ರಾಣಿ-ಪಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ವಿಪರ್ಯಾಸ. ಇಂದು ಬೆಂಗಳೊರಿನ ಆಸುಪಾಸಿನಲೆಲ್ಲೂ ಗುಬ್ಬಿಯ ಸುಳಿವು ಇಲ್ಲ. ಜಾಗತೀಕರಣ, ಅತಿಯಾದ ನಾಗರೀಕರಣದಿಂದಾಗಿ ಹಸಿರಿನ ಬುಡಕ್ಕೆ ಕೂಡ್ಲಿ ಇಟ್ಟಿರುವುದೇ ಇದಕ್ಕೆ ಕಾರಣ ಎಂಬುದು ವಾಸ್ತವಿಕ ಸಂಗತಿಯಾದರೆ, ಮೊಬೈಲ್ ಫೋನುಗಳ tower ಗಳಿಂದ ಉಂಟಾಗುವ ತರಂಗಗಳ ಕಂಪನವು ಗುಬ್ಬಿಯ ಜನನ ಶಕ್ತಿಯನ್ನು ಕಡಿಮೆ ಮಾಡಿರುವುದೇ ಇದಕ್ಕೆ ಕಾರಣ ಎಂದು ಇನ್ನೊಂದು ಸಮೂಹದ ವಾದವಾಗಿದೆ. ಇತ್ತೀಚೆಗಷ್ಟೇ ಊಟಿಯ ಪ್ರಕೃತಿಯ ರಮ್ಯತಾಣದಲ್ಲಿ ಮೊಬೈಲ್ ಫೋನ್ Tower ಗಳ ನಡುವೆಯು ಗುಬ್ಬಿಗಳ ಚಿಲಿ-ಪಿಲಿಯನ್ನು ಕೇಳ ಆನಂದಿಸಿದ ನನಗೆ ಈ Tower ಬಗೆಗಿನ ವಾದವನ್ನು ಸಂಪೂರ್ಣವಾಗಿ ನಂಬುವುದು ಸ್ವಲ್ಪ ಕಷ್ಟವೇ.
ಕಾರಣ ಎನೇ ಇರಲಿ, ಗುಬ್ಬಿಗಳ ಚಿಲಿ-ಪಿಲಿಗಳ ಕಲರವ ಇಂದು ನೆನಪು ಮಾತ್ರ. ಮತ್ತು ಆ ನೆನಪು ಕೆಲವೊಮ್ಮೆ ಬಹಳ ಕಾಡಿಸುವುದುಂಟು, ಬಹುಶಃ ಬೆಂಗಳೂರಿಗರು ಗುಬ್ಬಿಯನ್ನು ನೋಡಲೇಬೇಕೆಂದು ಹಟಕ್ಕೆ ಬಿದ್ದರೆ ಅವುಗಳು ಕಾಣಸಿಗುವ ಹತ್ತಿರದ ತಾಣಗಳು ಎಂದರೆ ಬನ್ನೇರುಘಟ್ಟ, ವಿಮಾನ ನಿಲ್ದಾಣ, ನಂದಿ ಬೆಟ್ಟ ಮಾತ್ರ ಎನಿಸುತ್ತದೆ.
Friday, 15 January 2010
ನೂರೊಂದು ನೆನಪು
ಬಹಳ ದಿನಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಡುತ್ತಿದ್ದ ಸೋಲಿನ ಬಾಧೆಯ ಬಗ್ಗೆ ಬರೆದಿದ್ದೆ. ವರ್ಷ ಅಂತ್ಯ ಗೊಂಡಂತೆ ಆ ಸೋಲಿನ ಬಾಧೆಯು ನಶಿಸಿ ಹೋಗುತ್ತದೆ ಎಂಬ ನನ್ನ ಎಣಿಕೆ ಸುಳ್ಳಾದದ್ದು ಡಿಸಂಬರ್ 30 ರಂದು.ಕನ್ನಡ ಚಿತ್ರರಂಗಕ್ಕೆ ಒಂದು ಶಕ್ತಿಯಂತೆ ಇದ್ದ ಮೇರು ನಟ ಡಾವಿಷ್ಣುವರ್ಧನ್ ಅವರು ವರ್ಷಾಂತ್ಯ ಗೊಳ್ಳುವ ಮೊದಲೇ ತಮ್ಮ ಜೀವನದ ಅಂತ್ಯವನ್ನು ಕಂಡರು.
ವಿಷ್ಣು ಅವರ ಸಾವು ತೀರಾ ಅನಿರೀಕ್ಷಿತ, ಅದಕ್ಕೆ ಇರಬೇಕು ಅದನ್ನು ನಂಬಲು ಇನ್ನೂ ಅಸಾಧ್ಯ.
ಕ್ಷಮಿಸಿ,ನೊಂದು ಮರೆತುಹೋದ ವಿಷಯವನ್ನು ಮತ್ತೆ ಪ್ರಸ್ತಾಪಿಸಿ ನಿಮಗೆ ಬೇಜಾರು ಮಾಡ್ತಾಯಿದೀನಿ.
ನಾನು ಕೂಡ ಇದೇ ಕಾರಣದಿಂದ ಈ ವಿಷ್ಯದ ಪ್ರಸ್ತಾಪ ಮಾಡಿರಲಿಲ್ಲ, ಆದರೆ ಪದೇ ಪದೆ ವಿಷ್ಣು ಅವರ ಚಿತ್ರದ ತುಣುಕುಗಳನ್ನು ತೋರಿಸಿ ಮತ್ತೆ ಮತ್ತೆ ಅವರ ನೆನಪು ಕಾಡುವಂತೆ ಮಾಡುವ ಯಶಸ್ಸು ಮಾಧ್ಯಮಗಳಿಗೆ ಸಲ್ಲುತ್ತವೆ. ಅಂಥ ಮೇರು ನಟನ ನೆನಪಿಗೆ ಈ ಬ್ಲಾಗ್ ಅರ್ಪಣೆ.
ನಾಗರಹಾವು,ಸುಪ್ರಭಾತ, ರಾಯರು ಬಂದರು ಮಾವನ ಮನೆಗೆ, ಬಂಧನ, ಮುತ್ತಿನಹಾರ ಹೀಗೆ ಸಾಲಾಗಿ ತಮ್ಮ ಅಭಿನಯ ಕೌಶಲ್ಯವನ್ನು ತೋರಿಸಿದ ವಿಷ್ಣು ಅವರ ಚಿತ್ರಗಳ ಹೆಸರನ್ನು ಪಟ್ಟಿ ಮಾಡುತ್ತ ಹೋದರೆ ಈ ಬ್ಲಾಗ್ ಬಹಳ ದೊಡ್ಡದಾಗುತ್ತದೆ.
ಡಿ 30ರಂದು ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ವಿಷ್ಣುವರ್ಧನ್!! ಹೆಸರಾಂತ Internet search Engine ಆದ Google ನಲ್ಲಿ ಅಂದು ಹುಡುಕಲ್ಪಟ್ಟ ಅಂಶಗಳಲ್ಲಿ ಶೇ 65 ರಷ್ಟು ವಿಷ್ಣು ಅವರಿಗೆ ಸಂಭಂದ ಪಟ್ಟ ವಿಷಯಗಳು ಮತ್ತು ಇದೊಂದು ದಾಖಲೆ ಎಂದು ಸ್ವತಃ Google ಸಂಸ್ಥೆಯೆ ಹೇಳಿಕೆ ಕೊಟ್ಟಿತು. ಇಂಥ ಖ್ಯಾತಿಯುಳ್ಳ ಮಹಾನ್ ನಟನನ್ನು ಪಡೆದಕ್ಕಾಗಿ ಹೆಮ್ಮೆ ಪಡಬೇಕೊ ಅಥವ ಕಳೆದುಕೊಂಡಿದ್ದಕ್ಕೆ ದುಃಖಿಸಬೇಕೊ ತಿಳಿಯದು.
ಇಷ್ಟಲ್ಲ ಖ್ಯಾತಿಗಳಿಸಿದ್ದರೂ ವಿಷ್ಣುಗೆ ಇತ್ತೀಚಿನ ದಿನಗಳಲ್ಲಿ ಏನೋ ಅಸಮಾಧಾನ ಬಾಧಿಸುತಿತ್ತು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಅಭಿಪ್ರಾಯ ಪಡುತ್ತಾರೆ.
ವಿಷ್ಣುಗೆ ಆಸಕ್ತಿ ಕಡಿಮೆ ಆಗಿತ್ತೋ ಅಥವ ಅಭಿಮಾನಿಗಳ ಒತ್ತಾಯವೋ ಒಳ್ಳೆಯ ಅಭಿರುಚಿಯಿರುವ ಚಿತ್ರಗಲಲ್ಲಿ ವಿಷ್ಣು ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಅವರ
ಪ್ರತಿಭೆಯನ್ನು ನಮ್ಮ ಚಿತ್ರರಂಗವು ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನುವುದು ನನ್ನ ವಾದ.ಆ ಕಾರಣದಿಂದಲೆ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲೂ "ಬಳ್ಳಾರಿ ನಾಗ"ದಂತ ಚಿತ್ರದಲ್ಲಿ ನಟಿಸುವಂತ ದೌರ್ಭಾಗ್ಯವನ್ನು ಕಾಣಬೇಕಾಯ್ತು.
ಇಂತ ಮಹಾನ್ ನಟನ ಕೈ ಹಿಡಿದ ಭಾರತಿ ಅವರ ಪರಿಸ್ಥಿತಿಯನ್ನು ಅಂದು ನೋಡಿ ನಿಜಕ್ಕೂ ಬಹಳ ಹಿಂಸೆಯಾಯ್ತು. ಗಂಡನ ಕಳೆದುಕೊಂಡ ನೋವಿನ ಭಾರದ ಜೊತೆ ರೊಚ್ಚಗೆದ್ದ ಅಭಿಮಾನಿ ರೂಪದ ಕಿಡಿಗೇಡಿಗಳ ಸಮೂಹವನ್ನುದ್ದೇಶಿಸಿ "ದಯವಿಟ್ಟು ಯಾರು ಗಲಾಟೆ ಮಾಡಬೇಡಿ" ಎಂದು ಕೈ ಮುಗಿದು ಶಾಂತಿಗೊಳಿಸುವ ಜವಾಬ್ದಾರಿಯನ್ನೂ ಹೊರಬೇಕಾಯ್ತು. ಇಷ್ಟೆಲ್ಲರ ನಡುವೆಯೂ ’ಜೈ’ ಕಾರ ಹಾಕುವಂತ ಅವಿವೇಕದ ಕೆಲಸವನ್ನು ಮಾಡಿದ ತಿಳಿಗೇಡಿಗಳನ್ನು ಅಭಿಮಾನಿಗಳೆಂದು ಪರಿಗಣಿಸಲು ಸ್ವಲ್ಪ ಕಷ್ಟವೇ.
ವಿಷ್ಣು ಅವರ ಸಾವು ನಾಡಿಗೆ ಭರಿಸಲಾಗದ ನಷ್ಟ, ಆದರೆ ಅದಕ್ಕಿಂತಲೂ ಹೆಚ್ಚಿನ ನಷ್ಟವನ್ನು ರೊಚ್ಚಗೆದ್ದ ಅಭಿಮಾನಿ ಸಮೂಹವು ಮಾಡಿತೆನ್ನುವುದು ನಾಚಿಕೆಗೇಡಿನ ವಿಷಯ.
ಇಷ್ಟೆಲ್ಲವನ್ನು ನೇರ ಪ್ರಸಾರದಲ್ಲಿ ತೋರಿಸುತ್ತಿದ್ದ ವಾಹಿನಿಗಳು ಜೊತೆಯಲಿ ವಿಷ್ಣು ಅವರ "ದಿಗ್ಗಜರು" ಚಿತ್ರದ ತುಣುಕನ್ನು ತೋರಿಸಿತು, ವಿಷ್ಣು ಅವರನ್ನು ಯಮದೂತರು ಕರೆದೊಯ್ಯುತ್ತಿರುತ್ತಾರೆ ಆಗ ವಿಷ್ಣು "ಬರುವಾಗ ನಾನು ಏನು ಹೊತ್ಗೊಂಡು ಬರಲಿಲ್ಲ, ಆದರೆ ಹೋಗುವಾಗ ನಿಮ್ಮ ಪ್ರೀತಿ, ಅಭಿಮಾನ ಹೊತ್ಗೊಂಡು ಹೋಗ್ತಾಯಿದೀನಿ...........ನಾ ಮತ್ತೆ ಹುಟ್ಟಿ ಬರ್ತೀನಿ" ಎಂಬ ಮಾತನ್ನು ಹೇಳುವ ಸನ್ನಿವೇಶವನ್ನು ಮತ್ತೆ ಮತ್ತೆ ತೋರಿಸಿದಾಗ..ನಿಜಕ್ಕೂ ವಿಷ್ಣು ಈ ಮಾತನ್ನು ಅಂದು ವಾಸ್ತವದಲ್ಲೂ ಆಡಿದಂತೆ ಭಾಸವಾಗುತ್ತಿತ್ತು.
ಆ ಮಾತು ನಿಜವಾಗುತ್ತ?
ಆಗಲಿ ಅಂತ ನಾನು ಆಶಿಸುತ್ತೇನೆ. ನೀವು??
Wednesday, 30 December 2009
ಸುಲಭದ ದಾರಿ ಯಾವುದಯ್ಯಾ???
ಪಾರ್ಕಿನಲ್ಲಿ ಆಗ ತಾನೆ walking ಮುಗಿಸಿ ಬೆಂಚಿನ ಮೇಲೆ ಕೂತಿದ್ದವನಿಗೆ ತುಸು ದೂರದಲ್ಲೇ ಕುಳಿತು ಮಾತನಾಡುತಿದ್ದ ಮುದುಕರ ಸಮೂಹದ ಕಡೆಗೆ ಗಮನ ಹರಿಯಿತು.
ಅವರ ಮಾತು ತುಸು ಜೋರಾಗೆ ಇದ್ದಿದ್ದರಿಂದ ಅವರ ಸಂಭಾಷಣೆ ಕೇಳಲು ಅಷ್ಟೇನು ಕಷ್ಟವಾಗಲಿಲ್ಲ. ಸಹಜವಾಗಿ ಇನ್ಯಾರದೋ ವಿಷಯವನ್ನು ಮಾತನಾಡುತಿದ್ದರು. ನಾಲ್ಕಾರು ಜನ ಸೇರಿದಾಗ ಅದಕ್ಕಿಂತ ಖುಷಿ ಕೊಡುವ ಮತ್ತು ಹೊತ್ತು ಕಳೆಯುವ ಪರಿ ಮತ್ತೊಂದಿಲ್ಲ.
"ರಾಮರಾಯರ ಮಗ ಹೊಸ ಕಾರು ತಗೊಂಡ್ನಂತೆ, ಹತ್ತು ಲಕ್ಷ ಅಂತೆ".
"ಹೌದಾ?!! ಈಗಿನವರಿಗೆ ಏನ್ರೀ? ಐಟಿ, ಬೀಟಿ, ಅಂತ ಲೆಕ್ಕ ಇಲ್ದಂಗೆ ದುಡ್ಡನ್ನು ಬಹಳ ಸುಲಭವಾಗಿ ಮತ್ತು ಬೇಗ ಸಂಪಾದಿಸುತ್ತಾರೆ, ಈಗಿನವರದೇ ಆರಾಮ್ ಜೀವನ ಕಣ್ರೀ"
ನನ್ನ ಪಂಚೇಂದ್ರಿಯಗಳು ಒಮ್ಮೆಗೆ ಚುರುಕಾದವು, ಇನ್ಯಾರದೋ ವಿಷಯ ಕೇಳಲು ನಂಗೆ ಯಾವುದೇ ರೀತಿಯಾದ ಆಸಕ್ತಿ ಇರಲಿಲ್ಲ, ಆದರೆ ಅವರು ಪ್ರಸ್ತಾಪಿಸಿದ "ಈಗಿನವರು" , "ಸುಲಭವಾಗಿ ದುಡ್ಡು.." ಈ ಎರಡು ಪದಗಳು ತಲೆ ಕೊರೆಯಲು ಶುರು ಇಟ್ಟವು.
"ಈಗಿನವರಿಗೆ ದುಡ್ಡಿನ ಬೆಲೆಯ ಅರಿವಿಲ್ಲ" ಎನ್ನುವ ಹಿರಿಯರ ಆಕ್ಷೇಪಣೆಯನ್ನು ತಕ್ಕ ಮಟ್ಟಿಗೆ ಒಪ್ಪಬಹುದಾದರೂ "ಈಗಿನವರು ಸುಲಭವಾಗಿ ದುಡ್ಡು ಮಾಡ್ತಾರೆ" ಎನ್ನುವ ಮಾತನ್ನು ಒಪ್ಪುವುದಾದರು ಹೇಗೆ?
ನಿಜವಾಗಲೂ ಸುಲಭವಾಗಿ ದುಡ್ದು ಮಾಡುವ ದಾರಿ ಎಲ್ಲಾದರು ಇದಯೇ? ಎಂಬ ದಿಕ್ಕಿನಲ್ಲಿ ಯೋಚನಾಲಹರಿ ಹರಿಯುವಂತಾಯಿತು.
ಇಂದು ಜಾಗತೀಕರಣದ ಸಲುವಾಗಿ ದೊರೆಯುತ್ತಿರುವ ಹಲವಾರು ಉದ್ಯೋಗಾವಕಾಶಗಳಿಂದ ಎಲ್ಲರೂ ದುಡ್ಡು ಮಾಡುವಂತಾಗಿದೆ. ಹಣದಬ್ಬರ ತುಸು ಹೆಚ್ಚಾಗಿದೆ ಎನ್ನುವುದೂ ಸುಳ್ಳಲ್ಲ, ಅದರ ಜೊತೆಯಲ್ಲೆ ಒದಗಿ ಬರುವ ಐಶಾರಾಮವೂ ಜೀವನ ಶೈಲಿಯನ್ನು ಬದಲಿಸಿದೆ ಎನ್ನುವುದೂ ಸುಳ್ಳಲ್ಲ.
ಆದರೆ "ಸುಲಭವಾಗಿ ದುಡ್ದು......." ಇದನ್ನು ಮಾತ್ರ ಮನಸ್ಸು ಒಪ್ಪುವುದಿಲ್ಲ.
ಒಬ್ಬ Software Engineer ಕಾರಿನಲ್ಲಿ ಓಡಾಡುವುದು,ಅವನ ಲಕ್ಷಗಟ್ಟಲೆ ಸಂಭಳವೂ/ಬಂಗಲೆ ಎಲ್ಲವೂ ನಮ್ಮ ಕಣ್ಣಿಗೆ ಕಾಣುವುದು, ಆದರೆ ತನ್ನ ಐಶಾರಾಮದ ಆಫೀಸಿನಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿದ್ದುಕೊಂಡೆ ಬೆವರುವಂತ ಒತ್ತಡದಲ್ಲಿ ಆತ ಕೆಲಸ ಮಾಡುವುದು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ.
ಒಬ್ಬ ಸಿನೆಮಾ ನಟ ಒಂದು ಸಿನೆಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಒಂದು ಕೋಟಿಯಿರಬಹುದು, ಆದರೆ ಆ ಮಟ್ಟಕ್ಕೆ ಏರಲು ಆತ ಪಟ್ಟಿರುವ ಪರಿಶ್ರಮವಿರುತ್ತದೆ ಮತ್ತು ಆ ಸ್ಥಾನ ಉಳಿಸಿಕೊಳ್ಳಲು ಆತ ಸದಾ ಶ್ರಮಿಸುತಿರುತ್ತಾನೆ.
ಒಬ್ಬ ಸೋನು ನಿಗಮ್ ಒಂದು ಹಾಡಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆಯಬಹುದು, ಆದರೆ ಹಾಗೆ ಹಾಡಲು ಅವನು ಎಷ್ಟು ವರ್ಷ ಶ್ರಮ ಪಟ್ಟನೆಂದು ಅವನಿಗೇ ಗೊತ್ತು. ( ಇಲ್ದೇ ಇದ್ರೆ ಇಂದು ನಾವೆಲ್ಲರೂ ಸೋನು ನಿಗಮ್ ಆಗಬಹುದಿತ್ತು ಅಲ್ವೇನ್ರಿ??).
ಒಬ್ಬ ವ್ಯಾಪರಸ್ಥ, ಒಬ್ಬ ಉದ್ಯಮಿ, ಒಬ್ಬ ಉದ್ಯೋಗಪತಿ, ಒಬ್ಬ Builder, ಕೊನೆಗೆ ರಸ್ತೆಯ ಮೂಲೆಯಲ್ಲಿ ನಿಂತು ಬರುವ ವಾಹನಗಳತ್ತ ಕೈಯೊಡ್ಡಿ ನೂರಾರು ಕಾರಣ ಕೊಟ್ಟು, ಸಾವಿರಾರು ರೂಪಾಯಿ ದಂಡ ಶುಲ್ಕ ತಪ್ಪಿಸುವ ನೆಪದಲ್ಲಿ ನೂರಿನ್ನೂರು ತನ್ನ ಜೇಬಿಗೆ ಇಳಿಸುವ Traffic Police, ಇವರೆಲ್ಲರೂ ತಮ್ಮ ಎಣಿಕೆಗೆ ಮೀರಿ ದುಡಿಯುತ್ತಾರೆ, ಯಾರಿಗೂ ತಮ್ಮ ಕೆಲಸ ಸುಲಭವಾದದ್ದು ಅಂತ ಅನ್ನಿಸುವುದೇ ಇಲ್ಲ.
ವ್ಯಾಪರಸ್ತನಿಗೆ ಉದ್ಯಮಿಯ ಕೆಲಸ ಆರಾಮ ಎನಿಸಬಹುದು, ಸದಾ ಪೈಪೋಟಿ ಎದುರಿಸುವ ಒಬ್ಬ Builderನ ಕಣ್ಣಿಗೆ ಇನ್ಯಾರದೋ ವೃತ್ತಿಯು ಆರಾಮವಾಗಿ ಕಾಣುತ್ತದೆ. ಬಿಸಿಲಿನಲ್ಲಿ ದಿನವಿಡೀ ನಿಂತು, ಸದಾ ಬರ್ರ್ ಗುಡುವ ವಾಹನಗಳ ಸದ್ದನ್ನು ಆಲಿಸುತ್ತಾ, ಅವುಗಳು ಬಿಡುವ ಹೊಗೆಯನ್ನು ನುಂಗುತ್ತಾ ತಪ್ಪಿತಸ್ಥರಿಗಾಗಿ ಹದ್ದಿನ ಕಣ್ಣಿನಿಂದ ಕಾಯುವ Traffic Policeಗೆ ತನ್ನ ಕೆಲಸ ಬಿಟ್ಟು ಇನ್ಯಾವುದೇ ಕೆಲಸ ಆರಾಮವಾದದ್ದು ಅಂತ ಅನಿಸಿದರೆ ಅದು ಅವನ ತಪ್ಪಲ್ಲ.
ವೃತ್ತಿ ಯಾವುದೇ ಆಗಲಿ ಅದರಲ್ಲಿ ಅದರದೇ ಆದ "ಕಷ್ಟ" "ಸುಖ"ದ ನಂಟು ಇರುತ್ತದೆ, ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಯಶಸ್ಸಿನ ಗುಟ್ಟು ಅವರ ಶಿಸ್ತು, ಪರಿಶ್ರಮವಾಗಿರುತ್ತದೆ. ಅದೃಷ್ಟವೆಂಬುದು ಇದರಲ್ಲಿ ಒಂದು ಸಣ್ಣ ಅಂಶ ಮಾತ್ರ.
ಆದರೆ ಇದ್ಯಾವುದನ್ನು ಗಮನಿಸದೆ "ಅವರದ್ದು ಆರಾಮ ಕೆಲ್ಸ, ಸುಲಭವಾಗಿ ದುಡ್ಡು ಮಾಡುತ್ತಾರೆ" ಎನ್ನುವ ತತ್ವ ತಪ್ಪು.
ಸಂಜೆ ಆಯ್ತೆನ್ನುವಂತೆ ಸೂಚನೆ ಇಡುವ ಸಲುವಾಗಿ ಸೊಳ್ಳೆಯ ಕಡಿತದ ಮೂಲಕ ಯೋಚನಾಲಹರಿಯಿಂದ ವಾಸ್ತವಕ್ಕೆ ಬಂದೆ. ಮುದುಕರ ಸಮೂಹದ ಕಡೆಗೆ ಒಮ್ಮೆ ದೃಷ್ಟಿ ಹರಿಸಿದೆ, ಅವರ ಕಾರಿನ ಸಂವಾದ ನಡೆಯುತ್ತಲೇ ಇತ್ತು. "ದುಡಿಯಲು ಸುಲಭದ ದಾರಿ ಯಾವುದು??" ಎಂದು ಕೇಳಲು ಮುಂದಾದೆ.
ಉತ್ತರ ಅವರು ಕೊಟ್ಟರೊ ಬಿಟ್ಟರೊ, ನೀವು ಕೊಡ್ತೀರಾ????
Monday, 12 October 2009
ಒಂದು ಹಿಟ್ ಸಿನೆಮಾ ಬೇಕು.......ಸಾರ್....
ಈ ವರ್ಷ ಇನ್ನೇನು ಮುಗೀತಾ ಬಂತು, ಆದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ವರ್ಷ ಶುರು ಆಗಲೇ ಇಲ್ಲ. ಹೊಸ ವರ್ಷದ ಹೊಸ ಕನಸು, ಹೊಸ ಸಿನೆಮಾ, ಹೊಸ ಹಾಡು, ಹೊಸ ಹಿಟ್ .....ಊಹುಂ...ಇದ್ಯಾವುದು ಅವರ ಪಾಲಿಗೆ ದಕ್ಕಲಿಲ್ಲ. ದಕ್ಷಿಣ ಭಾರತದಲ್ಲಿ ಅತ್ಯಂತ ಕಡೆಯ ಸ್ಥಾನದಲ್ಲಿ ಕನ್ನಡ ಚಿತ್ರೋದ್ಯಮ ಬೇರು ಬಿಟ್ಟಿದೆ.
ಒಂದು ಕಾಲದಲ್ಲಿ ತಮ್ಮ ವಿಭಿನ್ನ ಶೈಲಿಗೆ ಹೆಸುರುವಾಸಿಯಾಗಿದ್ದ ಪುಟ್ಟಣ ಕಣಗಾಲ್, ಬಿ. ಆರ್. ಪಂತಲು, ಮುಂತಾದವರು ತಯಾರಿಸುತಿದ್ದ ಚಿತ್ರಗಳು ಬೇರೆ ಭಾಷೆಗಳಲ್ಲಿ ತಯಾರಾಗುತ್ತಿದ್ದವು. ಅಂತ ಒಂದು ಹೊಸತನವಿರುತ್ತಿತ್ತು ಅವ್ರ ಚಿತ್ರಗಳಲ್ಲಿ.
ಬಹುತೇಕ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳಾಗಿರುತ್ತಿದ್ದವು, ಕಥೆಗೆ ಪ್ರಾಮುಖ್ಯತೆ ಇರುತ್ತಿತ್ತು. ಪಾತ್ರಗಳಲ್ಲಿ ವಿಭಿನ್ನತೆ ಇರುತ್ತಿತ್ತು. ಆದರೆ ಇಂದಿನ ಚಿತ್ರಗಳಲ್ಲಿ ನೈಜತನವಿಲ್ಲ, ಬಹುತೇಕ ಎಲ್ಲವೂ ಅನ್ಯ ಭಾಷೆಗಳಿಂದ ನಕಲು ಮಾಡಿದ ಸಿನೆಮಾಗಳೆ.
ಹಾಗಂತ ನಮ್ಮಲ್ಲಿ ಒಳ್ಳೆ ಕಲೆಗಾರರಿಗೆ ಭರ ಇದೆ ಅಂತ ಅಲ್ಲ, "ಶ್" ಎಂಬ ವಿಶಿಷ್ಟವಾದ ಸಿನೆಮಾ ತೋರಿಸಿದ ಉಪೇಂದ್ರ, "ತರ್ಕ" , "ಉತ್ಕರ್ಷ" ಎಂಬ Suspense thriller ಚಿತ್ರಗಳನ್ನು ಕೊಟ್ಟ ಸುನಿಲ್ ಕುಮಾರ್ ದೇಸಾಯಿ, ಇತ್ತೀಚೆಗೆ ಹೊಸ ಅಲೆ ಎಬ್ಬಿಸಿರುವ "ಮುಂಗಾರು ಮಳೆ" ಯೋಗರಾಜ್ ಭಟ್, "ದುನಿಯಾ" ಸೂರಿ, "ಸೈನೈಡ್" (ಇದು ಈಗ ಹಿಂದಿಯಲ್ಲು ತಯಾರಾಗುತ್ತಿದೆ) ಖ್ಯಾತಿಯ ಎ.ಎಮ್. ಅರ್. ರಮೇಶ್ ಹೀಗೆ ಹೇಳುತ್ತ ಹೋದರೆ ಒಂದು ದೊಡ್ಡ ಪಟ್ಟಿಯೇ ತುಂಬುವುದು.
ಇಷ್ಟೆಲ್ಲಾ ಮೈಲಿಗಲ್ಲು ಸಾಧಿಸಿರುವ ನಮ್ಮ ಕನ್ನಡ ಚಿತ್ರರಂಗಕ್ಕೆ ಇಂದು ಭಾಧಿನುತ್ತಿರುವುದಾದರೂ ಎನು? ಕಲೆ,ಕಥೆ, ಇವುಗಳ ಕೊರತೆಯೇ? ಹಣದ ಕೊರತೆಯೇ? ಉತ್ತರ ಹೇಳುವುದು ಸ್ವಲ್ಪ ಕಷ್ಟವೆ. ಯಾಕೇಂದ್ರೆ ಇದ್ಯಾವುದಕ್ಕು ಕೊರತೆ ಇಲ್ಲವೇ ಇಲ್ಲ.
ಆದರೂ "ಸೋಲು" ಎಂಬ ಎರಡಕ್ಷರದ ಪದ ನಮ್ಮ ಚಿತ್ರೋದ್ಯಮವನ್ನು ಕಂಗಾಲಾಗುವಂತೆ ಮಾಡಿದೆ. ಸೋಲಿನ ಭೀತಿ ಎಷ್ಟ್ರಮಟ್ಟಿಗೆ ಇದೆ ಅಂದ್ರೆ ಎಲ್ಲರೂ ಗೆಲುವಿನ ಕುದುರೆಯ ಹಿಡಿಯುವ ಸಲುವಾಗಿ "ರಿಮೇಕ್" ಎಂಬ ಕಪ್ಪೆಚಿಪ್ಪಿನ ಗೂಡಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಈ ವರ್ಷ ಇದುವರೆಗೂ ತೆರೆಕಂಡ ಯಾವುದೇ ಚಿತ್ರವು ವಾಣಿಜ್ಯ ದೃಷ್ಟಿಯಿಂದ ಗೆದಿಲ್ಲ ಎನ್ನುವುದು ಬಹಳ ಸೂಕ್ಶ್ಮವಾಗಿ ಗಮನಿಸಬೇಕಾದ ವಿಷಯ. "ಎದ್ದೇಳು ಮಂಜುನಾಥ" ಜನರ ಮೆಚ್ಚುಗೆ ಗಳಿಸಿದ್ದರೂ ವಾಣಿಜ್ಯ ದೃಷ್ಟಿಯಿಂದ ಅದು ಹಿಟ್ ಅನ್ನಿಸಿಕೊಳ್ಳಲಿಲ್ಲ. ಹೇಮಂತ್ ಹೆಗ್ಡೆ ಅವರ "ಹೌಸ್ಫ಼ುಲ್" ಚಿತ್ರದ ಯಾವುದೇ ಪ್ರದರ್ಶನವು ಹೌಸ್ಫ಼ುಲ್ ಆಗಲಿಲ್ಲ ಅನ್ನುವುದು ವಿಪರ್ಯಾಸ.
ಮೊದಲೇ ತತ್ತರಿಸಿಹೋಗಿರುವ ಚಿತ್ರೋದ್ಯಮಕ್ಕೆ ಇದು ಆರದ ಗಾಯವಾಗಿದೆ.
ಕನ್ನಡ ಚಿತ್ರರಂಗ ಮೊದಲಿಂದಲೂ ತುಂಬ Safe Game ಆಡಿಕೊಂಡೇ ಬಂದಿದೆ, ಹಾಗಾಗಿ ಹೆಚ್ಚುವರಿ ಎಲ್ಲಾ ನಿರ್ಮಾಪಕರೂ "ರೀಮೇಕ್" ಹಾದಿ ಹಿಡಿದಿದ್ದರು, ಅದು ಕೆಲಕಾಲಕ್ಕೆ ಲಾಭದಾಯಕವೂ ಆಗಿತ್ತು, ಇತಿಹಾಸ ಕೆದುಕಿದಾಗ ಸಿಗುವ ಕೆಲವು ಉದಾಹರಣೆಗಳೆಂದರೆ "ರಣಧೀರ" "ರಾಮಾಚಾರಿ" ಹೆಚ್ಚುಕಡಿಮೆ ರವಿಚಂದ್ರನ್ ರ ಎಲ್ಲಾ ಚಿತ್ರಗಳು, "ಆಪ್ತಮಿತ್ರ" ಸೇರಿದಂತೆ ದ್ವಾರಕೀಶ್ ರ ಎಲ್ಲಾ ಚಿತ್ರಗಳು, ಸುಧೀಪ್ ರನ್ನು ಸ್ಟಾರ್ ಆಗಿ ಪರಿವರ್ತನೆ ಮಾಡಿದ "ಹುಚ್ಚ" ಅವರೇ ನಿರ್ದೇಶನ ಮಾಡಿದ "ಮೈ ಆಟೋಗ್ರಾಫ್" ಹೀಗೆ ಎಲ್ಲವೂ ರೀಮೇಕ್ ಚಿತ್ರಗಳೆ.
ಸುಲಭವಾಗಿ ಅನ್ಯ ಭಾಷೆ ಚಿತ್ರ ಒಂದನ್ನು ಕನ್ನಡೀಕರಿಸಿ ಹಾಕಿದ ಬಂಡವಾಳ ದಕ್ಕಬೇಕಾದರೆ ಸ್ವ-ಮೇಕ್ ಮಾಡುವ ಸಾಹಸವೇಕೆ ಎಂಬಂತ ಒಂದು ವಾತಾವರಣ ಸೃಷ್ಟಿಯಾಯಿತು, ಮುಂದೆ ಸಾಲಾಗಿ ಬಂದಿದ್ದು ಕನ್ನಡೀಕರಿಸಿದ ಚಿತ್ರಗಳೇ. ("ರೀ-ಮೇಕ್" ಎಂಬ ಪದದ ಬಳಕೆ ಕೆಲವರಿಗೆ ಆಗಿ ಬರುವುದಿಲ್ಲ).
ಭೂಗತ ಲೋಕದ ಕಥೆ ಆಧಾರಿತವಾದ "ಓಂ" , "ಜೋಗಿ" "ದುನಿಯಾ" ಒಂದು ಇತಿಹಾಸವನ್ನೇ ಸೃಷ್ಟಿ ಮಾಡಿದ ಚಿತ್ರಗಳು, ಪರಿಣಾಮ ಮುಂದೆ ಬಂದ (ಈಗಲೂ ಬರುತ್ತಿರುವ) ಎಷ್ಟೋ ಚಿತ್ರಗಳ ಮೂಲ ಕಥಾವಸ್ತು ಇದೇ ಆಯಿತು. "ಮಚ್ಚು" "ಲಾಂಗು" ನಾಯಕನ ಖಡ್ಡಾಯ ಆಯುಧಗಳಾದವು.
"ಕನ್ನಡದವರೇ ಕನ್ನಡ ಸಿನೆಮಾ ನೋಡಲ್ಲ..." ಅನ್ನುವುದು ನಿರ್ಮಾಪಕರ ಅಭಿಪ್ರಾಯ. "ಒಳ್ಳೇ ಸಿನೆಮಾ ಮಾಡುದ್ರೆ ಜನ ನೋಡ್ತಾರೆ" ಅಂತ "ಮುಂಗಾರು ಮಳೆ" "ಗಾಳಿಪಟ" ನಿರ್ದೇಶಕ ಯೋಗರಾಜ್ ಭಟ್ ಹೇಳಿಕೆ ನೀಡಿದ್ದರು, ಆದರೆ ಇತ್ತೀಚೆಗಷ್ತೆ ಬಿಡುಗಡೆಯಾದ ಅವರ "ಮನಸಾರೆ" ಚಿತ್ರವನ್ನೂ ಜನರು ಮನಸಾರೆ ತಿರಸ್ಕರಿಸಿದಾರೆ.
"ಎದ್ದೇಳು ಮಂಜುನಾಥ" ಚಿತ್ರದಲ್ಲಿ ಒಂದು ಮಾತಿದೆ "ಸ್ವಂತ ಬುದ್ಧಿ ಇರೋರು ರೀ-ಮೇಕ್ ಚಿತ್ರ ಮಾಡಬಾರ್ದು, ಸ್ವಂತ ಬುದ್ಧಿ ಇಲ್ದೇ ಇರೋರು ಸ್ವ-ಮೇಕ್ ಚಿತ್ರ ಮಾಡಬಾರ‍್ದು" ಅಂತ.
ಹಾಗಾದ್ರೆ ಚಿತ್ರೋದ್ಯಮದಲ್ಲಿ ಇರೋರು ಯಾರು? ಸ್ವಂತ ಬುದ್ದಿ ಇರೋರ ಅಥವ ಸ್ವಂತ ಬುದ್ಧಿ ಇಲ್ದೇ ಇರೋರ? ಅದರ ಬಗ್ಗೆ ಚರ್ಚೆ ಬೇಡ, ಅದೇನೆ ಇರಲಿ ಈ ವರ್ಷದಲ್ಲಿ ಇನ್ನು ಎರಡು ತಿಂಗಳು ಬಾಕಿ ಇದೆ, ಆಗಿರುವ ನಿರಾಶೆಯನ್ನು ಅಳಿಸುವ ಒಂದಾದರು ಚಿತ್ರ ಮೂಡಿಬರಲಿ ಎಂದಷ್ಟೇ ಹಾರೈಸುವೆ.

Subscribe to:
Posts (Atom)