Wednesday 30 December 2009

ಸುಲಭದ ದಾರಿ ಯಾವುದಯ್ಯಾ???


ಪಾರ್ಕಿನಲ್ಲಿ ಆಗ ತಾನೆ walking ಮುಗಿಸಿ ಬೆಂಚಿನ ಮೇಲೆ ಕೂತಿದ್ದವನಿಗೆ ತುಸು ದೂರದಲ್ಲೇ ಕುಳಿತು ಮಾತನಾಡುತಿದ್ದ ಮುದುಕರ ಸಮೂಹದ ಕಡೆಗೆ ಗಮನ ಹರಿಯಿತು.
ಅವರ ಮಾತು ತುಸು ಜೋರಾಗೆ ಇದ್ದಿದ್ದರಿಂದ ಅವರ ಸಂಭಾಷಣೆ ಕೇಳಲು ಅಷ್ಟೇನು ಕಷ್ಟವಾಗಲಿಲ್ಲ. ಸಹಜವಾಗಿ ಇನ್ಯಾರದೋ ವಿಷಯವನ್ನು ಮಾತನಾಡುತಿದ್ದರು. ನಾಲ್ಕಾರು ಜನ ಸೇರಿದಾಗ ಅದಕ್ಕಿಂತ ಖುಷಿ ಕೊಡುವ ಮತ್ತು ಹೊತ್ತು ಕಳೆಯುವ ಪರಿ ಮತ್ತೊಂದಿಲ್ಲ.
"ರಾಮರಾಯರ ಮಗ ಹೊಸ ಕಾರು ತಗೊಂಡ್ನಂತೆ, ಹತ್ತು ಲಕ್ಷ ಅಂತೆ".
"ಹೌದಾ?!! ಈಗಿನವರಿಗೆ ಏನ್ರೀ? ಐಟಿ, ಬೀಟಿ, ಅಂತ ಲೆಕ್ಕ ಇಲ್ದಂಗೆ ದುಡ್ಡನ್ನು ಬಹಳ ಸುಲಭವಾಗಿ ಮತ್ತು ಬೇಗ ಸಂಪಾದಿಸುತ್ತಾರೆ, ಈಗಿನವರದೇ ಆರಾಮ್ ಜೀವನ ಕಣ್ರೀ"
ನನ್ನ ಪಂಚೇಂದ್ರಿಯಗಳು ಒಮ್ಮೆಗೆ ಚುರುಕಾದವು, ಇನ್ಯಾರದೋ ವಿಷಯ ಕೇಳಲು ನಂಗೆ ಯಾವುದೇ ರೀತಿಯಾದ ಆಸಕ್ತಿ ಇರಲಿಲ್ಲ, ಆದರೆ ಅವರು ಪ್ರಸ್ತಾಪಿಸಿದ "ಈಗಿನವರು" , "ಸುಲಭವಾಗಿ ದುಡ್ಡು.." ಈ ಎರಡು ಪದಗಳು ತಲೆ ಕೊರೆಯಲು ಶುರು ಇಟ್ಟವು.
"ಈಗಿನವರಿಗೆ ದುಡ್ಡಿನ ಬೆಲೆಯ ಅರಿವಿಲ್ಲ" ಎನ್ನುವ ಹಿರಿಯರ ಆಕ್ಷೇಪಣೆಯನ್ನು ತಕ್ಕ ಮಟ್ಟಿಗೆ ಒಪ್ಪಬಹುದಾದರೂ "ಈಗಿನವರು ಸುಲಭವಾಗಿ ದುಡ್ಡು ಮಾಡ್ತಾರೆ" ಎನ್ನುವ ಮಾತನ್ನು ಒಪ್ಪುವುದಾದರು ಹೇಗೆ?
ನಿಜವಾಗಲೂ ಸುಲಭವಾಗಿ ದುಡ್ದು ಮಾಡುವ ದಾರಿ ಎಲ್ಲಾದರು ಇದಯೇ? ಎಂಬ ದಿಕ್ಕಿನಲ್ಲಿ ಯೋಚನಾಲಹರಿ ಹರಿಯುವಂತಾಯಿತು.
ಇಂದು ಜಾಗತೀಕರಣದ ಸಲುವಾಗಿ ದೊರೆಯುತ್ತಿರುವ ಹಲವಾರು ಉದ್ಯೋಗಾವಕಾಶಗಳಿಂದ ಎಲ್ಲರೂ ದುಡ್ಡು ಮಾಡುವಂತಾಗಿದೆ. ಹಣದಬ್ಬರ ತುಸು ಹೆಚ್ಚಾಗಿದೆ ಎನ್ನುವುದೂ ಸುಳ್ಳಲ್ಲ, ಅದರ ಜೊತೆಯಲ್ಲೆ ಒದಗಿ ಬರುವ ಐಶಾರಾಮವೂ ಜೀವನ ಶೈಲಿಯನ್ನು ಬದಲಿಸಿದೆ ಎನ್ನುವುದೂ ಸುಳ್ಳಲ್ಲ.
ಆದರೆ "ಸುಲಭವಾಗಿ ದುಡ್ದು......." ಇದನ್ನು ಮಾತ್ರ ಮನಸ್ಸು ಒಪ್ಪುವುದಿಲ್ಲ.
ಒಬ್ಬ Software Engineer ಕಾರಿನಲ್ಲಿ ಓಡಾಡುವುದು,ಅವನ ಲಕ್ಷಗಟ್ಟಲೆ ಸಂಭಳವೂ/ಬಂಗಲೆ ಎಲ್ಲವೂ ನಮ್ಮ ಕಣ್ಣಿಗೆ ಕಾಣುವುದು, ಆದರೆ ತನ್ನ ಐಶಾರಾಮದ ಆಫೀಸಿನಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿದ್ದುಕೊಂಡೆ ಬೆವರುವಂತ ಒತ್ತಡದಲ್ಲಿ ಆತ ಕೆಲಸ ಮಾಡುವುದು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ.
ಒಬ್ಬ ಸಿನೆಮಾ ನಟ ಒಂದು ಸಿನೆಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಒಂದು ಕೋಟಿಯಿರಬಹುದು, ಆದರೆ ಆ ಮಟ್ಟಕ್ಕೆ ಏರಲು ಆತ ಪಟ್ಟಿರುವ ಪರಿಶ್ರಮವಿರುತ್ತದೆ ಮತ್ತು ಆ ಸ್ಥಾನ ಉಳಿಸಿಕೊಳ್ಳಲು ಆತ ಸದಾ ಶ್ರಮಿಸುತಿರುತ್ತಾನೆ.
ಒಬ್ಬ ಸೋನು ನಿಗಮ್ ಒಂದು ಹಾಡಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆಯಬಹುದು, ಆದರೆ ಹಾಗೆ ಹಾಡಲು ಅವನು ಎಷ್ಟು ವರ್ಷ ಶ್ರಮ ಪಟ್ಟನೆಂದು ಅವನಿಗೇ ಗೊತ್ತು. ( ಇಲ್ದೇ ಇದ್ರೆ ಇಂದು ನಾವೆಲ್ಲರೂ ಸೋನು ನಿಗಮ್ ಆಗಬಹುದಿತ್ತು ಅಲ್ವೇನ್ರಿ??).
ಒಬ್ಬ ವ್ಯಾಪರಸ್ಥ, ಒಬ್ಬ ಉದ್ಯಮಿ, ಒಬ್ಬ ಉದ್ಯೋಗಪತಿ, ಒಬ್ಬ Builder, ಕೊನೆಗೆ ರಸ್ತೆಯ ಮೂಲೆಯಲ್ಲಿ ನಿಂತು ಬರುವ ವಾಹನಗಳತ್ತ ಕೈಯೊಡ್ಡಿ ನೂರಾರು ಕಾರಣ ಕೊಟ್ಟು, ಸಾವಿರಾರು ರೂಪಾಯಿ ದಂಡ ಶುಲ್ಕ ತಪ್ಪಿಸುವ ನೆಪದಲ್ಲಿ ನೂರಿನ್ನೂರು ತನ್ನ ಜೇಬಿಗೆ ಇಳಿಸುವ Traffic Police, ಇವರೆಲ್ಲರೂ ತಮ್ಮ ಎಣಿಕೆಗೆ ಮೀರಿ ದುಡಿಯುತ್ತಾರೆ, ಯಾರಿಗೂ ತಮ್ಮ ಕೆಲಸ ಸುಲಭವಾದದ್ದು ಅಂತ ಅನ್ನಿಸುವುದೇ ಇಲ್ಲ.

ವ್ಯಾಪರಸ್ತನಿಗೆ ಉದ್ಯಮಿಯ ಕೆಲಸ ಆರಾಮ ಎನಿಸಬಹುದು, ಸದಾ ಪೈಪೋಟಿ ಎದುರಿಸುವ ಒಬ್ಬ Builderನ ಕಣ್ಣಿಗೆ ಇನ್ಯಾರದೋ ವೃತ್ತಿಯು ಆರಾಮವಾಗಿ ಕಾಣುತ್ತದೆ. ಬಿಸಿಲಿನಲ್ಲಿ ದಿನವಿಡೀ ನಿಂತು, ಸದಾ ಬರ್ರ್ ಗುಡುವ ವಾಹನಗಳ ಸದ್ದನ್ನು ಆಲಿಸುತ್ತಾ, ಅವುಗಳು ಬಿಡುವ ಹೊಗೆಯನ್ನು ನುಂಗುತ್ತಾ ತಪ್ಪಿತಸ್ಥರಿಗಾಗಿ ಹದ್ದಿನ ಕಣ್ಣಿನಿಂದ ಕಾಯುವ Traffic Policeಗೆ ತನ್ನ ಕೆಲಸ ಬಿಟ್ಟು ಇನ್ಯಾವುದೇ ಕೆಲಸ ಆರಾಮವಾದದ್ದು ಅಂತ ಅನಿಸಿದರೆ ಅದು ಅವನ ತಪ್ಪಲ್ಲ.
ವೃತ್ತಿ ಯಾವುದೇ ಆಗಲಿ ಅದರಲ್ಲಿ ಅದರದೇ ಆದ "ಕಷ್ಟ" "ಸುಖ"ದ ನಂಟು ಇರುತ್ತದೆ, ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಯಶಸ್ಸಿನ ಗುಟ್ಟು ಅವರ ಶಿಸ್ತು, ಪರಿಶ್ರಮವಾಗಿರುತ್ತದೆ. ಅದೃಷ್ಟವೆಂಬುದು ಇದರಲ್ಲಿ ಒಂದು ಸಣ್ಣ ಅಂಶ ಮಾತ್ರ.
ಆದರೆ ಇದ್ಯಾವುದನ್ನು ಗಮನಿಸದೆ "ಅವರದ್ದು ಆರಾಮ ಕೆಲ್ಸ, ಸುಲಭವಾಗಿ ದುಡ್ಡು ಮಾಡುತ್ತಾರೆ" ಎನ್ನುವ ತತ್ವ ತಪ್ಪು.
ಸಂಜೆ ಆಯ್ತೆನ್ನುವಂತೆ ಸೂಚನೆ ಇಡುವ ಸಲುವಾಗಿ ಸೊಳ್ಳೆಯ ಕಡಿತದ ಮೂಲಕ ಯೋಚನಾಲಹರಿಯಿಂದ ವಾಸ್ತವಕ್ಕೆ ಬಂದೆ. ಮುದುಕರ ಸಮೂಹದ ಕಡೆಗೆ ಒಮ್ಮೆ ದೃಷ್ಟಿ ಹರಿಸಿದೆ, ಅವರ ಕಾರಿನ ಸಂವಾದ ನಡೆಯುತ್ತಲೇ ಇತ್ತು. "ದುಡಿಯಲು ಸುಲಭದ ದಾರಿ ಯಾವುದು??" ಎಂದು ಕೇಳಲು ಮುಂದಾದೆ.

ಉತ್ತರ ಅವರು ಕೊಟ್ಟರೊ ಬಿಟ್ಟರೊ, ನೀವು ಕೊಡ್ತೀರಾ????


5 comments:

  1. Sorry .. I am doing this in English ..

    As always .. Ur blog makes me think . Yes, this has always been the favourite topic for elders to discuss - "Eegina kaladavrige enri .. duddu andre lekka illa". You have put it very well. "Eegina kaladavru" buy car and bunglows easily .. but they are carrying around the burden of the loan for the next 5, 10 or even 20 years!!

    Easiest job .. Well .. u have answered it already - NONE. I have many people who tell me, after I left my job to take care of my baby, "ninde aaram jeevana" ... But Believe me, I have seen both sides. Even stay-at-home housewives/moms dont have easy jobs.

    I'll keep a watch on this page hoping that someone has an answer for your question.

    - Divya

    ReplyDelete
  2. yes vikku ninna matu 100% nija adre aa rithi mathu yake barutte gotta namma kaladalli kasta matra padta idddevu adre duddu uhu kantane irlilla estu yochane madi lekka hakidru manasprthi irli kai bichhi hana karchu madoke agthirlilla anta jeevana nadesidavarige eeegina hudugara karchu vecha nodi hagannisuvudu sahaja alva?navu iglu auto hatti manege baroke hindu mundu nodtivi namma talemarinavarige iginavara kastada arivirutte adre aisharami jeevanada shailige oggada mana (mudukaru aisarami jeevana nadesollava?anbeda aastyle bere)ee rithi comments madutte hottegakkolaiah

    ReplyDelete
  3. This is Rekha using pranav's ID, Good one Vikram!

    ReplyDelete
  4. I agree with you that there is no easy path for Sucess...But however i definitely feel that we have Fast track available for this generation than our parents(Thanks to India's growth). If we have the dedication to succeed then there are many options to achieve the same. I am sure most people including you agree with me.

    Just a feedback to you, Blog can be smaller for people to save some time :)

    --Vijay

    ReplyDelete